ಸರಳ ಸಂಸ್ಕೃತ ಪ್ರವೇಶ
🌺🌺 *ಸಂಸ್ಕೃತವ್ಯಾಕರಣಪ್ರವೇಶ* 🌺🌺 ವೇದಗಳಲ್ಲಿ ಸಮಸ್ತ ಆಧ್ಯಾತ್ಮಿಕ ಹಾಗೂ ಲೌಕಿಕವಿದ್ಯೆ/ಜ್ಞಾನವೂ ಅಡಗಿದೆ. ಅದನ್ನು ಅರ್ಥಮಾಡಿಕೊಂಡರೆ ನಮ್ಮ ಸನಾತನ ಧರ್ಮದ ನೆಲೆಗಟ್ಟು ಎಷ್ಟು,ಏನು ಎಂಬ ಅರಿವಾಗುತ್ತದೆ. ಜೊತೆಗೆ, ಆ ಸಮಸ್ತ ಜ್ಞಾನಾಮೃತವನ್ನೂ ಪಾನಮಾಡಬಹುದು; ಪುಣ್ಯವನ್ನೂ, ಮೋಕ್ಷವನ್ನೂ, ಸರ್ವಾಭೀಷ್ಟಗಳನ್ನೂ ಸಂಪಾದಿಸಬಹುದು. ಆದರೆ ವೇದವನ್ನು ಅರ್ಥಮಾಡಿಕೊಳ್ಳುವ ಹಾದಿಯು ಬಲು ದುರ್ಗಮವಾದದ್ದು. ಸುಗಮವಾದುದಲ್ಲ. "ಕೈ ಕೆಸರಾದರೆ ಬಾಯಿ ಮೊಸರು" ಎಂಬಂತೆ ಕಷ್ಟಪಟ್ಟರೆ ಸುಖ ಸಿಗುವುದರಲ್ಲಿ ಸಂಶಯವಿಲ್ಲ. ವೇದಾರ್ಥವರಿಯಲು ಶಾಸ್ತ್ರಗಳೆಂದೆನಿಸಿದ ವೇದದ ಷಡಂಗಗಳ ಅಧ್ಯಯನ ಬಹಳ ಅಗತ್ಯ. ಈಗ ಒಂದೊಂದಾಗಿ ಅಧ್ಯಯನ ಮಾಡಲು ಉಪಕ್ರಮಿಸೋಣವೇ? ಪ್ರಯತ್ನಿಸೋಣವೇ? "ಪ್ರಯತ್ನೇನ ವಿನಾ ಸಿದ್ಧಿ: ನಾಸ್ತಿ" ಪ್ರಯತ್ನವಿಲ್ಲದೆ ಸಿದ್ಧಿಸದು. ವ್ಯಾಕರಣವೂ ವೇದಾಂಗಗಳಲ್ಲೊಂದು. ಪಾಣಿನಿಯ ಅಷ್ಟಾಧ್ಯಾಯೀ ಎಂಬ ೮ ಅಧ್ಯಾಯಗಳ ವ್ಯಾಕರಣಗ್ರಂಥವು ಸರ್ವಮಾನ್ಯ. ಅದಕ್ಕೆ ಶೇಷಾವತಾರೀ ಭಗವಾನ್ ಪತಞ್ಜಲಿಮುನಿಯು "ವ್ಯಾಕರಣಮಹಾಭಾಷ್ಯ" ವೆಂಬ ಸುದೀರ್ಘವಿವರಣೆಯನ್ನು ನೀಡಿದನು. ಅದಕ್ಕೆ ಕೈಯ್ಯಟನು "ಮಹಾಭಾಷ್ಯಪ್ರದೀಪ:" ಎಂಬ ವೃತ್ತಿಯನ್ನು ಬರೆದಿದ್ದಾನೆ. ಈ ವೃತ್ತಿಗೆ ನಾಗೋಜಿ ಭಟ್ಟನು "ಮಹಾಭಾಷ್ಯಪ್ರದೀಪೋದ್ಯೋತ:" ಎಂಬ ಪುನರ್ವ್ಯಾಖ್ಯೆಯನ್ನು ವಿರಚಿಸಿದನು. *ಯೋಗೇನ ಚಿತ್ತಸ್ಯ ಪದೇನ ವಾಚಾಂ* *ಮಲಂ ಶ...