Posts

Showing posts from August, 2019

ವೈದಿಕ-ವ್ಯಾಕರಣ ೨

ವೈದಿಕ-ವ್ಯಾಕರಣ ೨ ಅಧ್ಯಾಯ ೨ ಸನ್ಧಿ-ಪ್ರಕರಣ ವೈದಿಕಭಾಷೆಯಲ್ಲಿ ಸಂಧಿಯ ನಿಯಮಗಳು ಪ್ರಾಯಶಃ ಲೌಕಿಕಭಾಷೆಯ ಸಂಧಿನಿಯಮಗಳಂತೆಯೇ ಇವೆ. ಆದರೆ, ಈ ಸಂಧಿಗಳ ಹೆಸರುಗಳು ಮಾತ್ರ ಭಿನ್ನವಾಗಿವೆ. ಸ್ವರ-ಸಂಧಿ ೧. ಪ್ರಶ್ಲಿಷ್ಟ-ಸನ್ಧಿ (Contracted / ಸಮೀಪಿಸಿದ / ಸಂಕೋಚಿಸಿದ) (ಪ್ರಶ್ಲಿಷ್ಟ— ಶ್ಲಿಷ ಆಲಿಂಗನೇ ಧಾತು; ಸ್ವರಗಳು ಒಂದನ್ನೊಂದು ಹತ್ತಿರ ಸೇರುವ ಸಂಧಿಪ್ರಕ್ರಿಯೆ) ಎರಡು ಸಮಾನ ಅಕ್ಷರ (ಸ್ವರ)ಗಳ ಸಂಧಿಯಾಗುವಾಗ ಆ ಸಮಾನಾಕ್ಷರವು ದೀರ್ಘವಾಗುತ್ತದೆ. ("ಸಮಾನಾಕ್ಷರೇ ಸಂಸ್ಥಾನೇ ದೀರ್ಘಮೇಕಮುಭೇ ಸ್ವರಮ್ |") ಅಂದರೆ, ಅ, ಇ, ಉ, ಋ— (ಹ್ರಸ್ವ / ದೀರ್ಘ) ಗಳ ಮುಂದೆ ಅವುಗಳದೇ ಹ್ರಸ್ವ / ದೀರ್ಘರೂಪಗಳು ಬಂದರೆ, ಅನುಕ್ರಮವಾಗಿ ಆ, ಈ, ಊ, ೠ— ಆಗುವುವು. ಉದಾ— ಅಶ್ವ + ಅಜನಿ— ಅಶ್ವಾಜನಿ |              ಸ್ರುಚಿ + ಇವ— ಸ್ರುಚೀವ |              ಮಧು + ಉದಕಮ್— ಮಧೂದಕಮ್ |              ಪಿತೃ + ಋಣಮ್— ಪಿತೄಣಮ್ || (ಲೌಕಿಕಸಂಸ್ಕೃತದಲ್ಲಿ ಇದಕ್ಕೆ ಸವರ್ಣದೀರ್ಘಸಂಧಿ ಎಂದು ಹೆಸರು. "ಅಕಃ ಸವರ್ಣೇ ದೀರ್ಘಃ"— ಪಾಣಿನೀಯಸೂತ್ರ)   ಅ, ಆ—...

ವೈದಿಕ ವ್ಯಾಕರಣ ೧

ವೈದಿಕ-ವ್ಯಾಕರಣ ೧ ನತ್ವಾ ಗಣಪತಿಂ ಭಕ್ತ್ಯಾ ಸ್ತುತ್ವಾ ಸರಸ್ವತೀಂ ಧಿಯಾ | ಸ್ಮೃತ್ವಾऽಚಾರ್ಯಾನ್ ಹರಿಂ ರುದ್ರಂ ಶ್ರುತ್ಯರ್ಥಸುಭಗಾಯ ಚ || ೧ || ಯತೇ ವ್ಯಾಕರಣಂ ವಕ್ತುಂ ವೈದಿಕಂ ಶಾಸ್ತ್ರಸಂಮಿತಮ್ | ಕರ್ಣಾಟಭಾಷಯಾ ತಸ್ಮಾತ್ ಸಹ್ಯತಾಂ ಪಂಡಿತೈರ್ಮುದಾ || ೨ || ಮೊದಲಿಗೆ ವಿಘ್ನೇಶ್ವರನನ್ನು ಸರ್ವವಿಘ್ನವಿನಾಶಕ್ಕಾಗಿ ಭಕ್ತಿಪೂರ್ವಕವಾಗಿ ನಮಿಸಿ, ವಿದ್ಯಾಧಿದೇವತೆಯಾದ ಸರಸ್ವತಿಯನ್ನು ಸುಜ್ಞಾನಕ್ಕಾಗಿ ಬುದ್ಧಿಪೂರ್ವಕವಾಗಿ ಸ್ತುತಿಸಿ ಹಾಗೂ ಆಚಾರ್ಯಪರಂಪರೆಯನ್ನೂ ಶ್ರೀಹರಿಹರರನ್ನೂ ಸ್ಮರಿಸಿ, ಸರ್ವಜ್ಞಾನಮಯವಾದ ಅನರ್ಘ್ಯವೂ ಆದ ವೇದರಾಶಿಯ ಸಮ್ಯಗರ್ಥಾನುಸಂಧಾನದ ಸೌಲಭ್ಯಕ್ಕಾಗಿ (ಸುಲಭತೆಗಾಗಿ) / ಸೌಭಾಗ್ಯಕ್ಕಾಗಿ (ಸುಭಗತೆಗಾಗಿ), ಶಾಸ್ತ್ರಸಂಮಿತವಾಗಿ ವೈದಿಕ ವ್ಯಾಕರಣವನ್ನು ಕನ್ನಡಭಾಷೆಯಲ್ಲಿ ಹೇಳಲು ಪ್ರಯತ್ನಿಸುತ್ತೇನೆ. ಹಾಗಾಗಿ, ನನ್ನೀ ದುಸ್ಸಾಹಸವನ್ನು ವಿದ್ವಜ್ಜನರು ಪ್ರೀತಿಯಿಂದ ಸಹಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತೇನೆ. ಅಧ್ಯಾಯ ೧ ವರ್ಣ-ವಿಚಾರ ವೈದಿಕಭಾಷೆಯಲ್ಲಿ ಒಟ್ಟು ೫೨ ವರ್ಣಗಳಿವೆ. ಇವುಗಳಲ್ಲಿ ೧೩ ಸ್ವರಗಳು ಹಾಗೂ ೩೯ ವ್ಯಂಜನಗಳು.  ೧. ಸ್ವರಗಳು (Vowels)— ೧೩ ಇವು ೨ ವಿಧ— ಸಮಾನಾಕ್ಷರಗಳು ಹಾಗೂ ಸಂಧ್ಯಕ್ಷರಗಳು (ಋಗ್ವೇದ ಪ್ರಾತಿಶಾಖ್ಯ). ಸಮಾನಾಕ್ಷರಗಳು (Monophthongs / Simple Vowels / ಸರಳ ಸ್ವರಗಳು)— ೯ अ (ಅ), आ (ಆ),...