ಸರಲಪಾಣಿನೀಯಮ್

ಸರಲಪಾಣಿನೀಯಮ್

(ಮಹರ್ಷಿ-ಪಾಣಿನಿ-ವಿರಚಿತ ಅಷ್ಟಾಧ್ಯಾಯೀ-ಯ ಸರಳ ವ್ಯಾಖ್ಯೆ)

ಡಾ || ಕೃಷ್ಣಮೂರ್ತಿಶಾಸ್ತ್ರೀ, ದಂಬೆ-ಪುಣಚ


|| ಓಂ ಶ್ರೀಗುರುಗಣಪತಿಭ್ಯಾಂ ನಮಃ ||


೧।೧।೧। ವೃದ್ಧಿರಾದೈಚ್ ॥

(ವೃದ್ಧಿಃ, ಆತ್ , ಐಚ್)


ಆತ್ = ಆ, ಐಚ್ = ಐ, ಔ (ಐಔಚ್—ಮಾಹೇಶ್ವರಸೂತ್ರ). 

ಆ, ಐ, ಔ—ಇವುಗಳಿಗೆ ವೃದ್ಧಿಸಂಜ್ಞೆಯು.

ವೃದ್ಧಿಃ + ಆತ್— ವೃದ್ಧಿರಾತ್ (ವಿಸರ್ಗರೇಫಸಂಧಿ).

ವೃದ್ಧಿರಾತ್ + ಐಚ್— ವೃದ್ಧಿರಾದೈಚ್ (ಜಶ್ತ್ವಸಂಧಿ).

ಆತ್ ಚ ಐಚ್ ಚ— ಆದೈಚ್ (ಸಮಾಹಾರದ್ವಂದ್ವಸಮಾಸ).


ಉದಾ— ಜಮದಗ್ನೇಃ ಗೋತ್ರಾಪತ್ಯಂ ಪುಮಾನ್ ಜಾಮದಗ್ನ್ಯಃ, ಅಶ್ವಲಸ್ಯ ಗೋತ್ರಾಪತ್ಯಂ ಪುಮಾನ್ ಆಶ್ವಲಾಯನಃ (ಆ). ಇತಿಕಸ್ಯ ಗೋತ್ರಾಪತ್ಯಂ ಪುಮಾನ್ ಐತಿಕಾಯನಃ, ಇತಿಹಾಸಸಮ್ಬದ್ಧಮ್ ಐತಿಹಾಸಿಕಮ್ (ಐ). ಉಪಗೋಃ ಅಪತ್ಯಂ ಪುಮಾನ್ ಔಪಗವಃ, ಉಪಮನ್ಯೋಃ ಅಪತ್ಯಂ ಪುಮಾನ್ ಔಪಮನ್ಯವಃ (ಔ).

ವೃದ್ಧಿಸನ್ಧಿಃ— ದೇವೇನ + ಏಕೇನ— ದೇವೇನೈಕೇನ (ಐ). ಜಲ + ಓಘಃ— ಜಲೌಘಃ (ಔ).


೧।೧।೨। ಅದೇಙ್ ಗುಣಃ ||

(ಅದೇಙ್, ಗುಣಃ)


ಅತ್ = ಅ, ಏಙ್ = ಏ, ಓ (ಏಓಙ್—ಮಾಹೇಶ್ವರಸೂತ್ರ).

ಅ, ಏ, ಓ— ಇವುಗಳಿಗೆ ಗುಣಸಂಜ್ಞೆಯು. 

ಅತ್ + ಏಙ್— ಅದೇಙ್ (ಜಶ್ತ್ವಸಂಧಿ).

ಅತ್ ಚ ಏಙ್ ಚ— ಅದೇಙ್ (ಸಮಾಹಾರದ್ವಂದ್ವಸಮಾಸ).


ಉದಾ— ಪಿತೃ—ಪಿತಾ, ನೇತೃ—ನೇತಾ, ಸ್ತೋತೃ—ಸ್ತೋತಾ, ಕರ್ತೃ—ಕರ್ತಾ, ಹರ್ತೃ—ಹರ್ತಾ, ಭವಿತೃ—ಭವಿತಾ, ಮಹಾ + ಋಷಿಃ—ಮಹರ್ಷಿಃ (ಅ). ದೇವ + ಇನ್ದ್ರಃ—ದೇವೇನ್ದ್ರಃ, ಮಹಾ + ಈಶಃ—ಮಹೇಶಃ (ಏ). ಸೂರ್ಯ + ಉದಯಃ—ಸೂರ್ಯೋದಯಃ (ಓ). ಇದರಲ್ಲಿ, ಮಹರ್ಷಿಃ, ದೇವೇನ್ದ್ರಃ, ಮಹೇಶಃ, ಸೂರ್ಯೋದಯಃ— ಇವುಗಳಲ್ಲಿ ಗುಣಸಂಧಿ ಇದೆ.


೧।೧।೩। ಇಕೋ ಗುಣವೃದ್ಧೀ ॥

(ಇಕಃ, ಗುಣವೃದ್ಧೀ)


ಗುಣವೃದ್ಧೀ = ಎಲ್ಲಿ ಗುಣಃ ಅಥವಾ ವೃದ್ಧಿಃ ಎಂದು ಸ್ವಸಂಜ್ಞೆಯಿಂದಲೇ ವಿಧಿಸಲ್ಪಡುವುದೋ ಅಲ್ಲಿ, ಇಕಃ = ಷಷ್ಠೀವಿಭಕ್ತ್ಯಂತವಾದ ಪದವು ಇರುವುದು, ಎಂಬ ಪರಿಭಾಷೆಯು.

ಇಕಃ + ಗುಣವೃದ್ಧೀ— ಇಕೋ ಗುಣವೃದ್ಧೀ (ವಿಸರ್ಗಸನ್ಧಿಃ).

ಗುಣಶ್ಚ ವೃದ್ಧಿಶ್ಚ— ಗುಣವೃದ್ಧೀ (ಇತರೇತರದ್ವನ್ದ್ವಸಮಾಸಃ).


ಉದಾ— "ಮಿದೇರ್ಗುಣಃ" (ಮಿದೇಃ ಗುಣಃ— ಎಂಬಲ್ಲಿ ಗುಣಸಂಜ್ಞೆಯ ಕಾರಣದಿಂದಾಗಿ, ಮಿದ್-ಸ್ನೇಹನೇ-ಧಾತುವಿಗೆ ಮಿದೇಃ- ಎಂದು ಷಷ್ಠೀಪ್ರಯೋಗವು)— ಮೇದ್ಯತಿ (ಮಿದ್—ಮೇದ್ಯತಿ, ಇಕಾರಕ್ಕೆ ಏಕಾರವು ಗುಣವು). "ಮೃಜೇರ್ವೃದ್ಧಿಃ" (ಮೃಜೇಃ ವೃದ್ಧಿಃ— ವೃದ್ಧಿಸಂಜ್ಞೆಯಿರುವುದರಿಂದಾಗಿ, ಮೃಜ್-ಶುದ್ಧೌ-ಧಾತುವಿಗೆ ಮೃಜೇಃ- ಎಂದು ಷಷ್ಠೀಪ್ರಯೋಗವು)— ಮಾರ್ಷ್ಟಿ (ಮೃಜ್—ಮಾರ್ಷ್ಟಿ, ಋಕಾರಕ್ಕೆ ಅರ್-ಕಾರವು ವೃದ್ಧಿಯು).




Comments

Popular posts from this blog

छन्दःशास्त्रभूमिका

संस्कृतशब्दव्युत्पत्ति-पर्यायपद-कोशः (संस्कृत-संस्कृत-ENGLISH)

सरलपाणिनीयम्